ಉತ್ಸವಗಳು


ಪುಷ್ಕರ ಪರ್ವ
ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಗುರುವು ಮಕರ ರಾಶಿಯನ್ನು ಪ್ರವೇಶಿಸಿದಾಗ, ತುಂಗಭದ್ರಾ ನದಿಯ ಸಂಗಮ ಸ್ಥಳದಲ್ಲಿ "ಪುಷ್ಕರ ಪರ್ವ" ಎಂಬ ವಿಷೇಶ ಪರ್ವವನ್ನು ತಿಂಗಳಕಾಲ ಆಚರಿಸಲಾಗುತ್ತದೆ.
ಶ್ರೀ ಸಂಗಮೇಶ್ವರ ರಥೋತ್ಸವ
ಚೈತ್ರಮಾಸದ ಬಿದಿಗೆಯಂದು ಶ್ರೀ ಸಂಗಮೇಶ್ವರ ದೇವರ ರಥೋತ್ಸವವನ್ನು ಆಚರಿಸಲಾಗುತ್ತದೆ.
ಆ ದಿನ ಸುತ್ತಮುತ್ತಲಿನ ಸುಮಾರು 10ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಊರಿನವರು ತಮ್ಮ ಊರಿನ ಗ್ರಾಮ ದೇವತೆಯನ್ನು ಅಲಂಕರಿಸಿಕೊಂಡು ವಾದ್ಯ ಸಮೇತ ಸಂಗಮ ಸ್ಥಳಕ್ಕೆ ಬಂದು, ವಿಶಾಲವಾದ ಮರಳಿನ ಪ್ರದೇಶದಲ್ಲಿ ಕುಳ್ಳಿರಿಸಿ, ಸಂಗಮದ ಪುಣ್ಯ ಜಲದಿಂದ ಪ್ರೋಕ್ಷಣೆ ಮಾಡಿ ಪೂಜೆಯನ್ನು ನೆರವೇರಿಸುತ್ತಾರೆ. ಭಜನೆ, ಹಾಡು ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ತಮ್ಮ ಊರಿಗೆ ಹಿಂದಿರುಗುತ್ತಾರೆ.
ಶ್ರೀ ಶಾರದಾಂಬಾ ರಥೋತ್ಸವ
ಆಶ್ವೀಜ ಮಾಸದ ವಿಜಯದಶಮಿಯ ದಿನ ಕೂಡಲಿ ಶೃಂಗೇರಿ ಮಹಾಸಂಸ್ಥಾನದಲ್ಲಿ ಜಗದ್ಗುರುಗಳ ಉಪಸ್ಥಿತಿಯೊಂದಿಗೆ ಶ್ರೀ ಶಾರದಾಂಬಾ ರಥೋತ್ಸವವು ವಿಜೃಂಭಣೆಯಿಂದ ನೆರವೇರುತ್ತದೆ.


ವೈಶಾಖ ಮಾಸದ ಶುಕ್ಲಪಕ್ಷದ ದಶಮಿಯ ದಿನ ಕೂಡಲಿ ಶೃಂಗೇರಿ ಮಹಸಂಸ್ಥಾನದಿಂದ ಶಂಕರಾಚಾರ್ಯರ ಅಭೂತಪೂರ್ವವಾದ ರಥೋತ್ಸವವು ಜಗದ್ಗುರುಗಳ ಉಪಸ್ಥಿತಿಯಲ್ಲಿ ನೆರವೇರುತ್ತದೆ.
ಶ್ರೀ ಶಂಕರಾಚಾರ್ಯರ ರಥೋತ್ಸವ
ಶ್ರೀ ಬ್ರಹ್ಮೇಶ್ವರ ರಥೋತ್ಸವ
ಆಶ್ವೀಜ ಮಾಸದ ಪೌರ್ಣಮಿಯಂದು ಶ್ರೀ ಬ್ರಹ್ಮೇಶ್ವರ ದೇವರ ರಥೋತ್ಸವವು ನೆರವೇರುತ್ತದೆ.
ಶ್ರೀ ಚಿಂತಾಮಣಿ ನರಸಿಂಹಸ್ವಾಮಿ ರಥೋತ್ಸವ
ಕಾರ್ತೀಕ ಮಾಸದ ಪೌರ್ಣಮಿಯದಿನ ಶ್ರೀ ಚಿಂತಾಮಣಿ ನರಸಿಂಹಸ್ವಾಮಿಯ ರಥೋತ್ಸವವು ನೆರವೇರುತ್ತದೆ.
ಶ್ರೀ ದುರ್ಗಾ ಪುಷ್ಯೋತ್ಸವ
ಪುಷ್ಯಮಾಸದ ಶುಕ್ಲಪಕ್ಷದಲ್ಲಿ ಶ್ರೀ ದುರ್ಗಾ ದೇವಿಯ ವಿಶೇಷ ಪುಷ್ಯೋತ್ಸವವು ನೆರವೇರುತ್ತದೆ.