ಸಂಶೋಧನೆ
ಕೂಡಲಿ ಶಾರದಾ ಫೌಂಡೇಷನ್
ಶೀಘ್ರದಲ್ಲಿ ಮಾಹಿತಿಯು ಲಭ್ಯವಾಗಲಿದೆ
ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರೀ ಅನುದಾನಿತ ಸಂಶೋಧನಾ ಕೇಂದ್ರಗಳಲ್ಲಿ ಭಾರತೀಯ ಜ್ಞಾನ ಪರಂಪರೆಯ ಅನೇಕ ವಿಷಯಗಳು ಸಂಶೋಧನೆಗೆ ಒಳಪಡುತ್ತಿವೆ ಹಾಗೂ ವಿಪುಲವಾದ ಜ್ಞಾನರಾಶಿಯ ನಿರ್ಮಾಣವಾಗುತ್ತಿದೆ. ಆದರೆ, ಈ ಎಲ್ಲ ಸಂಶೋಧನೆಗಳು ಜ್ಞಾನಪರಂಪರೆಗೆ ಸಂಬಂಧಿಸಿದ್ದಾಗಿದ್ದರೂ ಕೂಡ, ವೇದಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕರ್ಮಕಾಂಡದ ಬಗೆಗೆ ಎಲ್ಲಿಯೂ ಕೂಡ ಸಂಶೋಧನೆ ನಡೆಯುತ್ತಿಲ್ಲ. ಕರ್ಮಕಾಂಡಕ್ಕೆ ಸಂಬಂಧಿಸಿದ ಅನೇಕ ಆಚರಣೆಗೆಳು ನಶಿಸಿ ಹೋಗಿವೆ, ಗ್ರಂಥಗಳು ಸಿಗುತ್ತಿಲ್ಲ, ಹೇಳಿಕೊಡುವ ಆಚಾರ್ಯರುಗಳು ಇಲ್ಲ ಇತ್ಯಾದಿ ಅನೇಕ ಸಮಸ್ಯೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ವೇದ ಮಂತ್ರಗಳ ಕಂಠಸ್ಥೀಕರಣ ಮಾಡುವುದರಿಂದ ವೇದ ಪಂಡಿತರುಗಳು ನಿರ್ಮಾಣವಾಗುತ್ತಾರೆಯೇ ಹೊರತು, ಆ ವೇದದ ಪ್ರಾಯೋಗಿಕ ನೆಲೆಯಲ್ಲಿ ಉಪಯೋಗ ಆಗುವುದಿಲ್ಲ. ಮಂತ್ರಗಳ ಪ್ರಯೋಗವು, ಅಂದರೆ ಅನುಷ್ಠಾನವು ಕೂಡ ನಡೆದಾಗಲೇ ಅದರ ಪ್ರಯೋಜನವು ಸಮಾಜಕ್ಕೆ ಉಂಟಾಗುತ್ತದೆ. ಹಾಗಾಗಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಅನೇಕ ರೀತಿಯ ಸಂಶೋಧನೆಗಳನ್ನು ಮಾಡಿ, ವೈದಿಕ ಅನುಷ್ಠಾನ ವಿಧಾನಗಳನ್ನು ಶುದ್ಧರೂಪದಲ್ಲಿ ರಕ್ಷಿಸುವ ನಿಟ್ಟಿನಲ್ಲಿ ಕೂಡಲೀ ಶೃಂಗೇರೀ ಮಹಾ ಸಂಸ್ಥಾನವು ವಿಶ್ವೇಶ್ವರ ವೈದಿಕ ಸಂಶೋಧನಾ ಕೇಂದ್ರವನ್ನು ಕಾಶಿಯಲ್ಲಿ ಪ್ರಾರಂಭಿಸಿದೆ.