ಗೋ ಶಾಲೆ
ಕೂಡಲಿಯಲ್ಲಿರುವ ಮಠದಲ್ಲಿ “ಶ್ರೀನಿವಾಸ” ಭವನದ ಎದುರುಗಡೆ ಭಾರತೀ ಗೋಶಾಲೆ ಇರತ್ತದೆ. ದೇಸೀ ತಳಿಗಳ 70ಕ್ಕೂ ಹೆಚ್ಚು ಹಸುಗಳು ಇದರಲ್ಲಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಗೋಕಳ್ಳರಿಂದ ರಕ್ಷಿಸಲ್ಪಟ್ಟ ಅನೇಕ ಹಸುಗಳು ಇಲ್ಲಿ ಆಶ್ರಯ ಪಡೆದಿರುತ್ತವೆ.
ಕೂಡಲಿಯಲ್ಲಿರುವ ಭಾರತೀ ಗೋಶಾಲೆಯು ಶ್ರೀ ಸಂಸ್ಥಾನದ ಮೂಲಕ ನಡೆಸಲ್ಪಡುತ್ತಿದ್ದು ಒಂದು ನೂರು ಹಸುಗಳು ಇಲ್ಲಿ ಆಶ್ರಯ ಪಡೆದಿವೆ. ಗೋವುಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಒಂದು ಸಾವಿರ ಗೋವುಗಳ ಸಾಮರ್ಥ್ಯ ಹೊಂದಿರುವ ನೂತನ ಗೋಶಾಲೆಯ ನಿರ್ಮಾಣ ಜಗದ್ಗುರುಗಳ ಸಂಕಲ್ಪವಾಗಿದೆ.